Posts

Showing posts from February, 2019
                               ಕಥೆ                    ಪ್ರೀತಿಯೆಂದರೆ ??? ದೇವಸ್ಥಾನದಿಂದ ಮಗಳ ಹೆಸರಲ್ಲಿ ಪೂಜೆ ಮಾಡಿಸಿ ಪ್ರಸಾದ ಕೈಲಿಡಿದು ಬಂದ ತಾಯಿಯ ಹೆಜ್ಜೆ ಆಸ್ಪತ್ರೆಯ ವಾರ್ಡ್‌ ಕೋಣೆ ಬಾಗಿಲಲ್ಲಿ ನಿಂತುಬಿಟ್ಟಿತು , ಮಗಳ ಮೊಗದ ವೇದನೆಗೆ ತಾಯಿ ಮನ ಕಣ್ಣೀರಿಡುತ್ತಾ ವಾರ್ಡ್‌ ಬಾಗಿಲ ಹೊರಗಿ ಕುಳಿತುಬಿಟ್ಟಿತು . ವಯಸ್ಸಿಗೆ ಬಂದ ಮಗಳು ಹಿಮನಿ , ಒಂದು ಬೆಳಿಗ್ಗೆ ಎದ್ದವಳೇ ವಾಂತಿ ಮಾಡಿಕೊಂಡು ಮೂರ್ಛೆ ಬಂದವಳಂತೆ ಕಣ್ಣು ಮೇಲೆ ಮಾಡಿಕೊಂಡು ಜೊಲ್ಲು ಸುರಿಸುತ್ತಾ ಕೈಕಾಲು ಅದುರಲು ತಂದೆ ತಾಯಿ ನಿಂತಲ್ಲೇ ನಡುಗಿಹೋದರು , ತಕ್ಷಣ ಅವಳನ್ನು ಆಸ್ಪತ್ರೆಗೆ ಕರೆತಂದ ಅವರು ಅವಳನ್ನು ವೈದ್ಯರೇಳಿದ ಎಲ್ಲಾ ಪರೀಕ್ಷೆಗೆ ಒಡ್ಡಿದರು , ವೈದ್ಯರ ಚಿಕಿತ್ಸೆಯಿಂದ ಕೊಂಚ ಚೇತರಿಸಿಕೊಂಡಿದ್ದ ಹಿಮನಿಯ ನೋಡಿಕೊಳ್ಳುತ್ತಾ ತಂದೆ ತಾಯಿ ಆಸ್ಪತ್ರೆಯಲ್ಲಿ ಪರೀಕ್ಷೆಗಳ ಫಲಿತಾಂಶಕ್ಕಾಗಿ ಕಾದು ಕೂತಿದ್ದರು . ವೈದ್ಯರು ತಂದೆ ತಾಯಿಯನ್ನು ತಮ್ಮ ಕೋಣೆಗೆ ಬರುವಂತೆ ಹೇಳಿಕಳುಹಿಸಿದರು , ವೈದ್ಯರ ಮುಖವೂ ತುಸು ಗೊಂದಲದಲ್ಲಿತ್ತು , ತಂದೆ ತಾಯಿ ವೈದ್ಯರೆದುರು ಆಸೀನರಾಗಲು ವೈದ್ಯರು ಹುಸಿನಗೆ ಬೀರಿ ಮಾತು ಮೊದಲು ಮಾಡಿದರು , ಮತ್ತೊಮ್ಮೆ ಹಿಮನಿಯ ರಿಪೋರ್ಟ್ಸ್‌ಗಳೆಡೆ ಕಣ್ಣಾಡಿಸಿದ ವೈದ್ಯರು ನಿಮ್ಮ ಮಗಳ ಮೆದುಳಲ್ಲಿ ಒಂದು ಗ