Posts

Showing posts from May, 2018
         ಓದೋ ವಯಸ್ಸಲ್ಲಿ ಓದಿ , ಪ್ರೀತಿ ಮಾಡೋ ವಯಸ್ಸಲ್ಲಿ ಪ್ರೀತಿ ಮಾಡಿ , ಮದುವೆ ಆಗೋ ವಯಸ್ಸು ಬಂದಾಗ ಮದುವೆ ಆಗಬಹುದು .. ಮಕ್ಕಳು ಒಂದು ವಯಸ್ಸಿಗೆ ಬಂದಾಗ ಮನೆಯಲ್ಲಿ ಪದೇಪದೇ ತಂದೆ ತಾಯಿ ಹೇಳುವ ಮಾತು . ಕೆಲವೊಮ್ಮೆ ಈ ಮಾತು ಮಕ್ಕಳಿಗೆ ಕಿರಿಕಿರಿಯಾಗುವುದೂ ಉಂಟು . ಆದರೆ ಆ ಮಾತು ಸಮಾಜದ ಘಟನೆಗಳ ಅನುಭವದ ಕಿವಿಮಾತು ಎಂಬುದ ಮರೆತು ಬಿಡುತ್ತೇವೆ .         ಕಾಲೇಜಿನಲ್ಲಿ ಓದುವ ಹೆಣ್ಣು ಮಕ್ಕಳ ಹಿಂದೆ ಹಿಂದೆ ಅಲೆದು , ಕಾಡಿಸಿ , ಅವರ ತಲೆ ಕೆಡಿಸಿ , ಪ್ರೀತಿ ಪ್ರೇಮದ ಬಲೆ ಬೀಸಿ , ಅವರನ್ನು ಒಪ್ಪಿಸಿ , ಒಪ್ಪದಿದ್ದರೆ ಅವರನ್ನು ಕದ್ದು ಹೊಯ್ದು ಮದುವೆಯಾಗುತ್ತಾರೆ . ಕೆಲವೊಮ್ಮೆ ಇವರ ಹುಚ್ಚಾಟವ ತಡೆಯದೆ ಪೋಷಕರೇ ಮುಂದೆ ನಿಂತು ಮದುವೆ ಮಾಡಿಬಿಡುತ್ತಾರೆ . ಈಗ ಕಾಲೇಜಿನವರೇನು ಈ ಆಟಗಳು ಹೈಸ್ಕೂಲ್‌ ಹಂತದಲ್ಲೇ ಶುರು , ಈಗ ಎಲ್ಲಾ ಪೋಷಕರಿಗೂ ಮಕ್ಕಳಿಗೆ ಒಳ್ಳೆ ವಿದ್ಯಾಭ್ಯಾಸ ಮಾಡಿಸುವಾಸೆ , ಆದರೂ ಈ ಕಾರಣ ಪ್ರಸ್ತುತ ದಿನಗಳಲ್ಲಿ ನಡೆಯುವ ಬಾಲ್ಯವಿವಾಹಕ್ಕೆ ಪ್ರಮುಖ ಕಾರಣವೆಂದರೆ ಅತಿಶಯವಾಗದು .          ಸರಿ ಹೀಗೆ ಮದುವೆಯಾದ ಒಂದೆರಡು ವರ್ಷ ಅವಳ ಪಾಲಿಗೆ ಸ್ವರ್ಗ .. ಮಾತಲ್ಲೇ ಮಂಟಪ ಕಟ್ಟಿ ಅಂಗೈಲಿ ಆಕಾಶ ತೋರಿಸಿ ಎಲ್ಲರಿಗಿಂತ ಅವನೇ ಮುಖ್ಯ ಎಂಬ ಭಾವನೆಗೆ ಅವಳನ್ನು ತಂದು ನಿಲ್ಲಿಸಿ ಅವ
ಆಗ ತಾನೇ mbbs ಮುಗಿಸಿ ಒಂದು ವರ್ಷ ಕಡ್ಡಾಯ ಗ್ರಾಮೀಣ ಸೇವೆಯಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸಕ್ಕೆ ಸೇರಿ ಕೆಲ ತಿಂಗಳಾಗಿತ್ತು ... ಸಂಬಂಧಿಕರೊಬ್ಬರ ಮನೆಯಲ್ಲಿ ಕೊಂಚ ಸಮಸ್ಯೆಯಿದ್ದರಿಂದ ಅವರ ಸಹಾಯಕ್ಕಾಗಿ ಅಮ್ಮ ತಮ್ಮ ಅಲ್ಲೇ ಇರಬೇಕಾದ ಅನಿವಾರ್ಯತೆಯಿತ್ತು .. ನಾನು ಅಪ್ಪಾಜಿ ಕೆಲಸದ ನಿಮಿತ್ತ ಮನೆಯಲ್ಲಿದ್ದೆವು , ಅಮ್ಮನಿಲ್ಲದ ಮನೆ ಕೇಳಬೇಕೇ , ಕೆಲಸದಿಂದ ಮನೆಗೆ ಬಂದೊಡನೆ ಮನೆ ಬಿಕೋ ಎನ್ನುತ್ತಿತ್ತು , ಕೆಲಸದಿಂದ ಬಂದ ಅಪ್ಪಾಜಿಯೂ ಸುಸ್ತಾಗಿರುತ್ತಿದ್ದರು , ನನ್ನೊಂದಿಗೆ ಸಮಯ ಕಳೆಯಲಾಗುತ್ತಿರಲಿಲ್ಲ .. ನನಗೆ ತುಂಬಾ ಬೋರಾಗಿ ಹೋಗುತ್ತಿತ್ತು .. ಅದೇ ಸಮಯಕ್ಕೆ ಒಂದು ನರ್ಸಿಂಗ್‌ ಹೋಂನಲ್ಲಿ ರಾತ್ರಿ ಪಾಣಿ ಕೆಲಸಕ್ಕೆ ವೈದ್ಯರು ಬೇಕೆಂಬುದು ನನ್ನ ಸ್ನೇಹಿತರ ಮುಖಾಂತರ ಕಿವಿಗೆ ಬಿತ್ತು .. ಸರಿ ಸುಮ್ಮನೆ ಬೋರಾಗಿ ಮನೆಯಲ್ಲಿರುವುದಕ್ಕಿಂತ ಕೆಲಸಕ್ಕಾದರೂ ಹೋಗೋಣವೇ ಎಂದು ಯೋಚಿಸಿದೆ .. ಮುಂಚಿಂದಲೂ ಯಾರ ಬಳಿಯಾದರೂ ಏನಾದರೂ ಕೇಳುವುದೆಂದರೆ ಮುಜುಗರ ಭಾವ ನನಗೆ , ಆದರೂ ಮನಸ್ಸು ಮಾಡಿ ಒಂದೆರಡು ದಿನ ಯೋಚಿಸಿ ನರ್ಸಿಂಗ್ ಹೋಂನಲ್ಲಿ ಹೋಗಿ ನೀವು ವೈದ್ಯರಿಗಾಗಿ ಹುಡುಕುತ್ತಿರುವಿರಲ್ಲಾ ನಾನು ಅದರ ಬಗೆಗೆ ವಿಚಾರಿಸಲು ಬಂದೆ ಅಂದೆ .. ಆಗ ಅಲ್ಲೊಬ್ಬರು ಆ ರೂಂನಲ್ಲಿರುವ ವ್ಯಕ್ತಿಯನ್ನು ಕಾಣಿ ಅವರು ನಿಮಗೆ