ಏಪ್ರಿಲ್‌ ತಿಂಗಳಲ್ಲಿ ಬುದ್ದ, ಬಸವಣ್ಣ, ಅಂಬೇಡ್ಕರ್, ಸಿದ್ದಗಂಗಾ ಶ್ರೀಗಳು, ಶಂಕರ ಜಯಂತಿ ಎಲ್ಲವನ್ನೂ ಒಟ್ಟಿಗೆ ಆಚರಿಸಿದ್ದೀರಿ, ಅವರ ತತ್ವ ಸಿದ್ದಾಂತಗಳ ಬಗೆಗೆ ಉದ್ದುದ್ದ ಭಾಷಣ ಬಿಗಿದಿದ್ದೀರಿ, ವಿಶ್ವಮಾನವ ಸಂದೇಶ ಸಾರಿದ ಮಹಾನ್‌ ವ್ಯಕ್ತಿತ್ವಗಳಿಗೆ ಗೌರವ ಸಲ್ಲಿಸಲು ವೇದಿಕೆಯೆಂಬಂತೆ ಬಾರಿ ಚುನಾವಣೆ ಅವರ ಜಯಂತಿಗಳ ಆಚರಿಸುವ ಹೊಸ್ತಿಲಲ್ಲೇ ಬಂದು ನಿಂತಿದೆ..

ನೀವು ಆಯ್ಕೆ ಮಾಡುತ್ತಿರುವುದು ಒಂದು ಜಾತಿ ಸಮುದಾಯಕ್ಕೆ ನಾಯಕನನ್ನಲ್ಲ, ದೇಶ ರಾಜ್ಯವನ್ನು ಸಮರ್ಥವಾಗಿ ನಡೆಸಬಲ್ಲ ಧೀಮಂತ ನಾಯಕನನ್ನ, ಜನರ ಕಷ್ಟಗಳಿಗೆ ಸ್ಪಂದಿಸೋ ಮನಸನ್ನ, ಸಮಸ್ಯೆಗಳು ಎದುರಾದಾಗ ನಿಭಾಯಿಸಬಲ್ಲ ಚಾಣಕ್ಯನನ್ನ....

ಪಕ್ಷದ ಸೆಳೆತ , ಜಾತಿ ಸಮುದಾಯದ ಸೆಳೆತ, ಪ್ರದೇಶದ ಸೆಳೆತ,ಆಸೆ ಆಮಿಷಗಳ ಸೆಳೆತ,ಎಲ್ಲವನ್ನೂ ಮೀರಿ ವ್ಯಕ್ತಿ ವ್ಯಕ್ತಿತ್ವಕ್ಕೆ ಅವರ ನಾಯಕತ್ವಕ್ಕೆ ಅವರ ಕ್ರಿಯಾಶೀಲ ಸೃಜನಶೀಲ ಹೊಸ ಚಿಂತನೆಗಳಿಗೆ ಬೆಲೆಕೊಟ್ಟು ಮತಚಲಾಯಿಸಿದರೆ ಬದಲಾವಣೆಯ ಕನಸು ಕಾಣಬಹುದೇ ಹೊರತು ಮತ್ತೆ ಯಾವ ದಾರಿಯಿಲ್ಲ....

ವಿದ್ಯಾವಂತರು ಯುವಜನ ಅರ್ಹ ನಾಯಕರನ್ನು ಚುನಾಯಿಸಲು ಇತರಿರಿಗೆ ಸಹಕರಿಸಿ ಅವರ ಮುಗ್ದತೆಯ ಯಾರೂ ಬಲಹೀನತೆ ಮಾಡಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳದಂತೆ ಎಚ್ಚರ ವಹಿಸಿ....

ದೇಶ ನಿರ್ಮಿಸಲು ನಿಮಗಿರುವ ಹಕ್ಕನ್ನು
ಯಾವುದಕ್ಕೂ ಮಾರಿಕೊಳ್ಳದೇ, ಯಾವುದೇ ಸೆಳತಕ್ಕೂ ಜೋತು ಬೀಳದೆ ನಿಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ, ಮತಗಟ್ಟೆಗೆ ಬಂದು ಮತ ಹಾಕಿ ಅರ್ಹ ವ್ಯಕ್ತಿಗಳನ್ನು ಚುನಾಯಿಸಿ ಸಮೃದ್ದ ಸಮಾಜ ನಿರ್ಮಾಣ ಮಹಾನ್‌ ಕಾರ್ಯದ ಪಾಲುದಾರರಾಗಿ....

ಮೇ 12 ತಪ್ಪದೇ ಮತ ಚಲಾಯಿಸಿ👍🏻

                  -ಡಾ.ಶಾಲಿನಿ.ವಿ.ಎಲ್‌


Comments

  1. ತುಂಬಾ ಅದ್ಭುತವಾಗಿ ಬರೆದಿದ್ದಿ ಶಾಲಿನಿ.,ನಿನ್ನ ಬರಹ ನೋಡಿಯಾದರೂ ಸಮರ್ಥರನ್ನು ಆರಿಸುವ ಪ್ರಯತ್ನ ಮಾಡಬೇಕು ಎಲ್ಲಾ ಮತದಾರರು....

    ReplyDelete

Post a Comment

Popular posts from this blog