1.ಸಮಯಕ್ಕೆ ಸಮಯ ಕೊಟ್ಟರೆ
ಸಮಯವೇ ಸಮಯದೊಂದಿಗೆ
ಸೇರಿ ಕೆಟ್ಟ ಸಮಯವ ಬದಿಗೆ ಸರಿಸಿ
ಒಳ್ಳೆ ಸಮಯವ ಬಳಿಗೆ ಕರೆಸಿ
ಸಮಯದ ಜೊತೆ ಸಮಯ ಕಳೆಸಿಬಿಡಬಹುದು
ಸಮಯದೊಂದಿಗೆ ಅನುಸರಿಸಿ ಸಮಯವಾಡುವ
ಆಟದ ಸವಿದರಲ್ಲವೇ
ಸಮಯದ ಸಿಹಿ ಕಹಿ ಅನುಭವವಾಗುವುದು।।

2.ಗುಟ್ಟು ಗುಟ್ಟಾಗಿ ಏನೋ ಗುಟ್ಟು ಮಾಡಿಕೊಂಡು
ಗುಟ್ಗುಟ್ಟಾಗಿ ಏನೋ ಗುಟ್ಟು ನಡೆಸುತಿಹೆಯಲ್ಲಾ
ನನ್ನಲ್ಲೂ ಗುಟ್ಟು ಮಾಡೋ ಗುಟ್ಟೇನು ನಿನಗೆ??
ನನ್ನೊಳಗಿರುವ ಗುಟ್ಟು ನನ್ನೊಳಗಿರುವ ಗುಟ್ಟಾಗಿದ್ದರೆ
ಗುಟ್ಟಾಗಿ ಉಳಿದರೆ ಚೆಂದ ಬಿಡು।
ಗುಟ್ಟದು ರಟ್ಟಾಗಿ ಬಿಟ್ಟರೆ ಗುಟ್ಟು ಮಾಡಿದ
ನನ್ನ ನೀ ಗುರುಗುಟ್ಟಿ ನೋಡಿದರೆ
ಗುಟ್ಟು ಮಾಡಿದ ಕಣ್ಗಳು ಬೆದರಿ ಮನಸ ಕಗ್ಗಂಟಿಗೆ ಸಿಲುಕಿಸಿ ಗುಟ್ಟಿಂದ ನನ್ನ ಗುಟ್ಟಾಗೇ ಉಳಿಯುವಂತೆ
ಮಾಡಿದರೆ ಕಷ್ಟ ನೋಡು।।

3.ಮನಸ್ಸು ಮನಸ್ಸು ಮಾಡಿ
ಮನಸ್ಸಿನೊಂದಿಗೆ ಮಾತಿಗೆ ನಿಂತಿತು
ಮನಸ್ಸೇ ಮನಸ್ಸು ಮಾಡಿ ನನ್ನ ಮನ್ನಿಸೆಂದಿತು
ಮುನಿಸುಂಟು ಮನಸ ಮೇಲೆ ಬಲ್ಲೆ ನಾ
ಮನಸೋತ ಮನಸ್ಸನ್ನು ಮನಸ್ಸಿಂದ ಬೇರ್ಪಡಿಸಿ
ಮನಸ್ಸೊಂದಿಗೆ ಮನೆ ಮನಸೇರಿಸಬೇಕಲ್ಲ
ಮನಸ್ಸಾವೊಲಿಸವೊರೆಗೂ ಈ ಹುಚ್ಚಾಟವ
ಸಹಿಸುತ್ತಾ ಮನ್ನಿಸು ಈ ಮನಸ್ಸನ್ನು
ಮತ್ತೊಮ್ಮೆ ಮನಸ್ಸು ಮಾಡಿ ಎನ್ನುತ್ತಾ।।
 
                      ಡಾ.ಶಾಲಿನಿ.ವಿ.ಎಲ್‌

Comments

Popular posts from this blog